ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com

ಉದ್ದೇಶಗಳು

ಫೆಡರೇಶನ್ನಿನ ಉದ್ದೇಶಗಳು ಈ ಕೆಳಗಿನಂತಿವೆ :

  • ಸದಸ್ಯರಲ್ಲಿ ಮಿತವ್ಯಯ, ಸ್ವಾವಲಂಬನೆ ಮತ್ತು ಪರಸ್ಪರ ಸಹಕಾರವನ್ನು ಹೆಚ್ಚಿಸುವುದು.
  • ಸದಸ್ಯರಿಗೆ ಮೀನು ಮತ್ತು ಮೀನು ಉತ್ಪತ್ತಿಗಳ ಆಧಾರದ ಮೇಲೆ ಸಾಲವನ್ನು ಕೊಡುವುದು ಮತ್ತು ಯಾಂತ್ರಿಕ ದೋಣಿನಿರ್ಮಾಣ ಮತ್ತು ಸಂರಕ್ಷಣೆ ಸಾಲವನ್ನು ಒದಗಿಸುವುದು.
  • ಮೀನು ಮತ್ತು ಮೀನು ಉತ್ಪನ್ನಗಳ ಸಗಟು ಮತ್ತು ಚಿಲ್ಲರೆ ಮಾರಾಟವನ್ನು ದೇಶÀ ಮತ್ತು ವಿದೇಶಗಳಲ್ಲಿ ಏರ್ಪಾಡು ಮಾಡುವುದು.
  • ಸದಸ್ಯರ ಮೀನು ಮತ್ತು ಮೀನು ಉತ್ಪನ್ನಗಳ ಖರೀದಿ ಹಾಗೂ ಮಾರಾಟ ಮತ್ತು ಸದ್ರಿ ಸದಸ್ಯರ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಯಾಗಿ ವ್ಯವಹರಿಸುವುದು.
  • ಸದಸ್ಯರ ವ್ಯಾಪಾರದ ಅನುಕೂಲಕ್ಕಾಗಿ ಮತ್ತು ಇತರ ಗ್ರಾಹಕರ ಹೊಂದಾಣಿಕೆಗೆ ಬೇಕಾಗುವಷ್ಟು ಉಪ ಶಾಖೆಗಳನ್ನು, ಮಾರಾಟ ಮಳಿಗೆಗಳನ್ನು ಅಗತ್ಯ್ತವಾದ ಕಡೆಯಲ್ಲಿ ತೆರೆಯುವುದು.
  • ಯಾಂತ್ರಿಕ ಮೀನುಗಾರಿಕಾ ಯೋಜನೆಯನ್ವಯ ಬೇಕಾಗುವ ದೋಣಿ ನಿರ್ಮಾಣ ಕಟ್ಟೆಯನ್ನು ಸ್ಥಾಪಿಸಿ ಯಾಂತ್ರಿಕ ದೋಣಿ ಮತ್ತು ಮೀನುಗಾರಿಕೆಗೆ ಬೇಕಾಗುವ ಸಲಕರಣೆಗಳನ್ನು ಉತ್ಪಾದಿಸುವುದು ಮತ್ತು ಯಾಂತ್ರಿಕ ದೋಣಿಗಳಿಗೆ ಬೇಕಾಗುವ ಹತ್ಯಾರುಗಳನ್ನು ಖರೀದಿಸಿ, ರಿಪೇರಿ ಮತ್ತು ಸರ್ವಿಸಿಂಗ್ ವಿಭಾಗಗಳನ್ನು ತೆರೆಯುವುದು.
  • ಮೀನು ಉತ್ಪಾದನೆ ಮತ್ತು ಮೀನು ಉತ್ಪನ್ನಗಳ ಜೋಪಾಸನೆ ಮತ್ತು ಮಾರಾಟಗಳ ಬಗ್ಗೆ ಬೇಕಾಗುವಂತಹ ಯಾಂತ್ರಿಕ ದೋಣಿಗಳನ್ನು, ಟ್ರಾಲರ್‍ಗಳನ್ನು, ಮಂಜುಗಡ್ಡೆ ಮತ್ತು ಶೀತಲ ಜೋಪಾಸನ ಕಾರ್ಖಾನೆಗಳನ್ನು, ಮೀನು ಉತ್ಪಾದನೆಯ ಪ್ರೊಸೆಸಿಂಗ್ ಕಾರ್ಖಾನೆಗಳನ್ನು, ಮೀನು ಕ್ಯೂರಿಂಗ್ ಯಾರ್ಡುಗಳನ್ನು ಮತ್ತು ಮೀನು ಸಾಗಾಟ ವಾಹನಗಳನ್ನು ವ್ಯವಸ್ಥೆ ಮಾಡುವುದು, ಗೋದಾಮುಗಳನ್ನು ಕಟ್ಟುವುದು ಅಥವಾ ಬಾಡಿಗೆಗೆ ಪಡೆದು ನಡೆಸುವುದು. ಅದಲ್ಲದೆ ಈ ಉದ್ದೇಶಗಳಿಗೆ ಬೇಕಾಗುವಂತಹ ಸ್ಥಿರ ಆಸ್ತಿಗಳನ್ನು ಪಡೆಯುವುದು ಯಾ ದೇಣಿಗೆಗೆ ಹೊಂದಿ ಸದಸ್ಯರಿಗೆ ಅಥವಾ ಸಂಯೋಜಿತ ಸಂಘಗಳ ಮತ್ತು ಮೀನುಗಾರಿಕಾ ವ್ಯವಸಾಯದಲ್ಲಿ ಸಂಬಂಧಿಸಿದವರಿಗೆ ಮಾರುವುದು ಅಥವಾ ಬಾಡಿಗೆಗೆ ಕೊಡುವುದು ಹಾಗೂ ಅಗತ್ಯ ಬಿದ್ದಲ್ಲಿ ಸಂಯೋಜಿತ ಸಂಘಗಳ ಕಾರ್ಯನಿರ್ವಹಣೆಯನ್ನು ವಹಿಸುವುದು.
  • ಮೆಂಬರರ ಪ್ರಯೋಜನಕ್ಕಾಗಿ ಮೀನುಗಾರಿಕಾ ವ್ಯವಸಾಯಕ್ಕೆ ಬೇಕಾಗುವಂತಹ ಮೀನುಗಾರಿಕಾ ಸಲಕರಣೆಗಳನ್ನು ಹಾಗೂ ಯಾಂತ್ರಿಕ ದೋಣಿಗಳಿಗೆ ಬೇಕಾಗುವ ಬಿಡಿಭಾಗಗಳನ್ನು ಖರೀದಿಸಿ, ಶೇಖರಿಸಿ ಸಗಟು ಯಾ ಚಿಲ್ಲರೆ ಮಾರಾಟ ಮಾಡುವುದು, ಯಾಂತ್ರಿಕ ದೋಣಿಗಳಿಗೆ ಬೇಕಾಗುವ ಡೀಸೆಲ್ ಎಣ್ಣೆ/ ಪೆಟ್ರೋಲ್ ಇತ್ಯಾದಿ ಮಾರಾಟ ಮಾಡುವುದು.
  • ಮೀನು ಮಾರಾಟದ ಅಭಿವೃದ್ಧಿಗಾಗಿ ಸಾಧ್ಯವಿದ್ದ ಕಡೆಗಳಲ್ಲಿ ಮೀನುಮಾರುಕಟ್ಟೆಗಳ ಮಾಲಕತ್ವವನ್ನು ಹೊಂದುವುದು ಅಥವಾ ಅದರ ಹಕ್ಕನ್ನು ಬಾಡಿಗೆಗೆ ಪಡೆದು ನಡೆಸುವುದು ಮತ್ತು ಮೀನು ಮಾರಾಟಕ್ಕಾಗಿ ಇಂತಹ ಮೀನು ಮಾರುಕಟ್ಟೆಗಳಲ್ಲಿ ಫಿಶ್ ಸ್ಟಾಲ್‍ಗಳನ್ನು ಸ್ಥಾಪಿಸುವುದು. ಈ ರೀತಿ ಮೀನು ಮಾರುಕಟ್ಟೆಗಳ ಮಾಲಕತ್ವವನ್ನು ವಹಿಸಿಕೊಳ್ಳಲು ಸದಸ್ಯ ಸಂಸ್ಥೆಗಳಿಗೆ ಪ್ರೋತ್ಸಾಹಿಸುವುಸು.
  • ಸದಸ್ಯರ ನಿತ್ಯ ಜೀವನಕ್ಕೆ, ಕೈಗಾರಿಕೆಗೆ ಮತ್ತು ಇತರ ಬಳಕೆಗೆ ಬೇಕಾಗುವ ಸಾಮಾಗ್ರಿಗಳನ್ನು ಜಂಟಿಯಾಗಿ / ನೇರವಾಗಿ ಖರೀದಿಸುವುದು ಮತ್ತು ಮಾರಾಟ ಮಾಡುವುದು.
  • ಮೀನುಗಾರರ ಸಾಮಾಜಿಕ, ಆರ್ಥಿಕ ಬೆಳವಣಿಗೆಗೋಸ್ಕರ ಯೋಜನೆಗಳನ್ನು ಕೈಗೊಳ್ಳುವುದು ಹಾಗೂ ಮೀನುಗಾರಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಬರುವಂತೆಯೂ ಸಂಯೋಜಿತ ಸಂಘಗಳ ಕಾರ್ಯಗಾರ ಮತ್ತು ಸಮ್ಮೇಳನಗಳನ್ನು ಜರಗಿಸುವುದು.
  • ಮೆಂಬರರಿಗೆ ಹಾಗೂ ಸಂಯೋಜಿತ ಸಂಘಗಳಿಗೆ ಮೀನು ಮಾರಾಟದ ಮಾಹಿತಿಗಳು ಸಿಗುವಂತೆ ತರಬೇತಿ ಮುಂತಾದ ವೃತ್ತಿಪರತೆಯ ಕಾರ್ಯಕ್ರಮಗಳನ್ನು ಏರ್ಪಾಡು ಮಾಡುವುದು.
  • ಮೀನು ಮತ್ತು ಮೀನು ಉತ್ಪನ್ನಗಳ ವರ್ಗಿಕರಣ ಮತ್ತು ಶೀಘ್ರ ಸಾಗಾಣಿಕೆಯ ವ್ಯವಸ್ಥೆ ಮಾಡುವುದು.
  • ಖಾಸಗಿ ಅಥವಾ ಸಹಕಾರಿ ಸಹಭಾಗಿತ್ವದಲ್ಲಿ ಕೈಗಾರಿಕೆ ಮತ್ತು ಉದ್ದಿಮೆಗಳನ್ನು ಸ್ಥಾಪಿಸುವುದು.
  • ಸದಸ್ಯರಿಂದ ಸಂಚಯ ಮತ್ತು ನಿರಖು ಠೇವಣಿ ಪಡೆಯುವುದು ಮತ್ತು ಬ್ಯಾಂಕಿಂಗ್ ವ್ಯವಹಾರ ನಡೆಸುವುದು.
  • ಸದಸ್ಯರ ಯಾಂತ್ರಿಕ ದೋಣಿಗಳ ಮತ್ತು ಇತರ ವ್ಯವಹಾರಗಳ ಮೇಲೆ ವಿಮಾ ಎತ್ತುವ ಸಾಮಾನ್ಯ ಇನ್ಸುರೆನ್ಸ್ ಕಂಪೆನಿಯ ಏಜೆಂಟರಾಗಿ ವ್ಯವಹರಿಸುವುದು.
  • ಫೆಡರೇಶನಿನ “ಸಿ” “ಡಿ” ಮತ್ತು “ಇ” ವರ್ಗದ ಸದಸ್ಯರಿಂದ ದೈನಂದಿನ ನಿತ್ಯನಿಧಿ (ಪಿಗ್ಮಿ) ಠೇವಣಿಯನ್ನು ಪಡೆಯುವುದು.
  • ಫೆಡರೇಶನಿನ “ಸಿ” “ಡಿ” ಮತ್ತು “ಇ” ವರ್ಗದ ಸದಸ್ಯರಿಗೆ ಬ್ಯಾಂಕಿಂಗ್, ಚಿಟ್ ಫಂಡ್ ವ್ಯವಹಾರದ ಸೌಲಭ್ಯ ನೀಡುವುದು.
  • ಈ ಮೇಲಿನ ಉದ್ದೇಶಗಳ ಕಾರ್ಯಾಚರಣೆಗೆ ಹಾಗೂ ಸಾಧನೆಗೆ ಬೇಕಾಗುವ ಅವಶ್ಯಕ ಕ್ರಮಗಳನ್ನು ಹಮ್ಮಿ ಕೊಳ್ಳುವುದು.